Don't wanna be here? Send us removal request.
Text
ಇವತ್ತು ಏನಾಗಿದೆ ಅಂದ್ರೆ, ಮಾತು ಒಂದು ರೀತಿ ಇದ್ದರೆ, ಕೃತಿ ಇನ್ನೊಂದು ರೀತಿ ಮಾತ್ರವಲ್ಲ; ಅದಕ್ಕೆ ತದ್ವಿರುದ್ಧ.... ನೋಡಿ, ಶಾಂತಿ ಶಾಂತಿ ಅಂತ ಹೇಳಿ, ಅಮೇರಿಕಾವು ಎಷ್ಟು ಹಸಿ ಹಸಿ ಮನುಷ್ಯರನ್ನು ಕೊಂದಿಲ್ಲ? ಕಮ್ಯೂನಿಸ್ಟ್ ಅನ್ನುತ್ತಲೇ ಚೀನಾವು ಒಂದ ದೊಡ್ಡ ಬಂಡವಾಳಷಾಹಿ ದೇಶವಾಗಿ ಬಿಟ್ಟಿದೆ. ದೇಶದೊಳಗೆನೇ ನೋಡಿ.. ಈ ಬಾರಿ ಮೋದಿಯು ಸಂವಿಧಾನಕ್ಕೆ ಕೈ ಮುಗಿಯುತ್ತಲೇ, ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿರುವುದು. ಬಿಜೆಪಿ, ಆರೆಸ್ಸೆಸ್ಸಿನ ವಿರೋಧಭಾಸಕ್ಕೆ ಎಣೆಯಿಲ್ಲ ಬಿಡಿ. ಅದು ದೇಶಪ್ರೇಮ, ಅಖಂಡ ಭಾರತ ಇತ್ಯಾದಿಗಳಿಂದ ಮೊದಲುಗೊಂಡು ಹಿಂದೂ ನಾವೆಲ್ಲಾ ಒಂದು, ಸಬ್ಕಾ ವಿಕಾಸ್, ಮೀಸಲಾತಿ ಇತ್ಯಾದಿ ಎಲ್ಲದರಲ್ಲೂ ತನ್ನ ಕಾಪಟ್ಯತನವನ್ನು ತೋರಿದೆ. ಇನ್ನು ಜನತಾದಳವು 'ಜಾ'ದ ಬದಲು 'ಕೋಜಾ' ಆದದ್ದೂ ಆಯಿತು. ಇದೀಗ ಆ ಸಾಲಿಗೆ ಆಮ್ ಆದ್ಮಿಯೂ ಸೇರಿತು. ಸೇರಿತು ಎನ್ನುವುದಕ್ಕಿಂತಲೂ ತನ್ನ ಒಳಗಿನ ಬಂಡವಾಳವನ್ನು ಬಯಲುಗೊಳಿಸಿತು ಎನ್ನಬಹುದು. ಆಮ್ ಆದ್ಮಿ ಎನ್ನುತ್ತಲೇ, ಕಾರ್ಪರೇಟುಗಳಿಗೆ ಮಣೆ ಹಾಕುತ್ತಿತ್ತು ಎನ್ನಲಾಗುತ್ತಿತ್ತು. ಈಗ 'ಆಮ್ ಆದ್ಮಿ'ಯು ಸರ್ವಾಧಿಕಾರದ (ರಾಜಾಳ್ವಿಕೆ) ರೂಪ ತಾಳಿದೆ. ಇನ್ನು ಕೇಜ್ರಿವಾಲ್ ಹಣ್ಣು ಹಣ್ಣು ಮುದುಕನಾದರೂ, ನೆನಪಿನ ಶಕ್ತಿ, ದೈಹಿಕ ಶಕ್ತಿ ಎಲ್ಲವೂ ಕುಂದಿದರೂ, ಕಟ್ಟಕಡೆಯ ಉಸಿರು ಇ���ುವವರೆಗೂ ಆತನೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥನಾಗಿರುತ್ತಾರೆ. ಹಾಗೆಂದು ಆ ಪಕ್ಷದ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ! ಹೇಗಿದೆ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಇತ್ಯಾದಿಗಳ ವಿರುದ್ಧ ಮಾತನಾಡಿದವರ ನವನವೀನ ನಡೆ!!

0 notes