Tumgik
onducupchaha · 6 months
Text
Tis’ been a rainbow, watchin’ ya sleep,
Wondrous as it is, for we dunno when it starts or ends,
Tis’ been an ocean, watchin’ ya sleep,
Nervous as it is, for we dunno its miraculous depth,
Tis’ been a miracle, watchin’ ya breathe,
Laborious as it is, for it is inviting to partake,
Tis’ been a pleasure, watchin’ ya breathe,
Soft as it is, for it is a temptation in its own right,
Tis’ been an honour, watchin’ you,
Beautiful as you are, for you belong to me,
Tis been a romance, being betrothed to you,
Feisty as you are, for I will never let go!!!
-Vikas Vasisht
(Remembering all the kisses, licks and bites I still need to give you)
0 notes
onducupchaha · 1 year
Text
ನೆನೆದರೆ ತರುವುದು ನೋವ
ನೆನೆಯದೇ ಹೋದರೆ ಕಳೆವುದು ಭಾವ
ಇದೇನಿದು ಜೀವದ ಮೇಲಿರುವ ಮೋಹ
ಬದುಕಲೇಬೇಕಂತಿರುವ ದಾಹ
ಬರೆದರೆ ನನ್ನ ಜೀವನದ ಪ್ರಬಂಧ
ತಿಳಿವುದು ನಿನಗದರಲ್ಲಿರುವ ನಿರ್ಬಂಧ
ನಿನ್ನ ನೆನೆದರೇ ನಾ ಸಜೀವ
ನಿನ್ನ ನೆನೆಯದೇ ಹೋಗಲೇ ನಾನಾಗುವೆ ನಿನ್ನವ
ದೊರೆತುಹೋಗು ಬೇಗನೆ ತುಸು ಕಾತುರ ನನಗೆ
ಜೀವನಸಾಥಿಯಾಗುವೆ ನಿನಗೆ ನಾ ಕೊನೆವರೆಗೆ
ದೂರ ಹೋಗುವ ಒಡನೆ ಹತ್ತು ನನ್ನ ಸವಾರಿ
ನೀನು ಕೂಡ ಈಗ ಪಯಣಿಗ, ಮಾಡಿಕೋ ನಿನ್ನ ತಯಾರಿ
-ವಿಕಾಸ ವಸಿಷ್ಠ
0 notes
onducupchaha · 2 years
Text
ನಡೆಸಿ ಪಯಣ ಸಿಹಿ ಕನಸುಗಳ ಜಗತ್ತಿನಡೆಗೆ,
ಹೂವಿನ ತೋಟ, ಮಂಜು ಭರಿತ ವಾತಾವರಣದೆಡೆಗೆ,
ವಿಶ್ರಾಮದ ಸುಖಮಯ ಭ್ರಮೆಯ ಕಡೆಗೆ,
ನಿದ್ರೆಯ ಸುಳಿಯ ಕಡೆಗೆ,
ಪಯಣಿಗ ನಾ, ಇದುವೇ ನನ್ನ ನಡಿಗೆ...
- ವಿಕಾಸ ವಸಿಷ್ಠ
1 note · View note
onducupchaha · 2 years
Text
ಯೆಪ್ಪತ್ತೈದು ವರ್ಷಗಳಾಯಿತು,
ಅನ್ಯ ರೀತಿಗಳಲ್ಲಿ ವಿಕಾಸವಾಯಿತು,
ದಶಕಗಳ ದೌರ್ಜನ್ಯ ಕೊನೆಯಾಗಿತ್ತು,
ಸಾರ್ವಭೌಮತ್ವ ದೊರೆತಿತ್ತು,
ಕಥೆ ಉಪಕಥೆ ಇತಿಹಾಸ ಬರೆದದ್ದಾಗಿತ್ತು,
ಜಾತಿ ಮತ ಧರ್ಮ ಭೇದ ಭಾವ ಇಲ್ಲದಂತೆ ಮಾಡಬಹುದಿತ್ತು,
ಅತ್ಯುನ್ನತ ಶಿಕ್ಷಣ ಸೌಕರ್ಯಗಳು ಲಭಿಸುವಂತೆ ಮಾಡಬಹುದಿತ್ತು,
ಸರ್ವ ಜನಾಂಗದ ಸದಸ್ಯರು ಸಮಾನವಿರಬಹುದಿತ್ತು,
ಆದರೆ ಇದ್ಯಾವುದೂ ನೆರವೇರದಂತಾಗಿತ್ತು.
ದೇಶಭಕ್ತಿ ದೇಶಪ್ರೇಮ ಉಕ್ಕಿ ಹರಿಯುತ್ತಿತ್ತು,
ನಿಷ್ಠೆ ಪ್ರಾಮಾಣಿಕತೆ ತುಂಬಿ ತುಳುಕುತ್ತಿತ್ತು,
ಅದೇ ಪ್ರೇಮ ದೇಶವಾಸಿಗಳ ಮೇಳಿಲ್ಲದಂತಾಗಿತ್ತು,
ಅದೇ ನಿಷ್ಠೆ ಪ್ರಾಮಾಣಿಕತೆ ದೇಶಸೇವೆಯಲ್ಲಿಲ್ಲದಂತಾಗಿತ್ತು,
ಶ್ರೀಮಂತರು ಶ್ರೀಮಂತಿಕೆಯಲ್ಲಿ ಮೇರೆಯುವಂತಾಗಿತ್ತು,
ಬಡವರು ಬಡತನದಲ್ಲಿ ಮುಳುಗುವಂತಾಗಿತ್ತು,
ಮಧ್ಯಮವರ್ಗದವರು ಅಡ್ಡ ಗೋಡೆ ಮೇಲೆ ದೀಪದಂತಿರುವಂತಾಗಿತ್ತು,
ಈ ಪರಿಸ್ಥಿತಿ ಬದಲಾಗದಂತಾಗಿತ್ತು.
ನಾಯಕರು ಬೆರಳ ತುದಿಯಲ್ಲಿ ಎಣಿಸುವಂತಾಗಿತ್ತು,
ರಾಜಕಾರಣಿಗಳು ದರೋಡೆಕೋರರಂತಾಗಿತ್ತು,
ನೈತಿಕತೆ ನೀತಿಶಾಸ್ತ್ರಕ್ಕೆ ಜಾಗವಿಲ್ಲದಂತಾಗಿತ್ತು,
ದೇಶ ಹೊತ್ತಿ ಉರಿಯುತ್ತಿತ್ತು,
ಪೀಳಿಗೆಯೊಂದು ಘರ್ಜಿಸುತ್ತಾ ಬಂದಿತ್ತು,
ಎಲ್ಲವನ್ನೂ ಸರಿಪಡಿಸತೊಡಗಿತ್ತು,
ಹೊಸ ಮುನ್ನುಡಿ ಬರೆಯತೊಡಗಿತ್ತು,
ಸ್ವತಂತ್ರದಿನಾಚರಣೆ ಪ್ರಯುಕ್ತವಾಗಿತ್ತು,
ಇವರಿಂದ ಹೊಸಕಥೆ ಪ್ರಾರಂಭಿಸಿತು.
- ವಿಕಾಸ ವಸಿಷ್ಠ
0 notes
onducupchaha · 2 years
Text
ಬದುಕೇ ನಿಂಗೆ ನನ್ನ ಕೃತಜ್ಞತೆ,
ದೊರೆಯಬೇಕಾದದ್ದಲ್ಲ ದೊರೆಯುವಂತೆ ಮಾಡುವೆ,
ಬದುಕೇ ನಿಂಗೆ ನನ್ನ ನಮನ,
ಕಲಿಕೆಯ ಅಭಾವ ಇಲ್ಲದಂತೆ ಮಾಡುವೆ,
ಬದುಕೇ ನಿಂಗೆ ನನ್ನ ಪ್ರೇಮ,
ಅನುಭವಿಸಬೇಕಾದದ್ದಲ್ಲ ಅನುಭವಿಸುವಂತೆ ಮಾಡುವೆ,
ಬದುಕೇ ನಿಂಗೆ ನನ್ನ ಕೋಪ,
ಚಿಟಿಕೆ ಹೊಡೆಯುವುದರಲ್ಲಿ ಮುಗಿದು ಹೋಗುವೆ,
ಬದುಕೇ ನಿಂಗೆ ನನ್ನ ವಿಜ್ಞಾಪನೆ,
ಇನ್ನೂ ತುಸು ದೂರ ನಡೆ, ಇಗೋ ನಾ ನಿನ್ನ ಪಯಣಿಗ.
- ವಿಕಾಸ ವಸಿಷ್ಠ
1 note · View note
onducupchaha · 2 years
Text
ಪ್ರಮುಖವಾದ ಸೂಚನೆಗೆ ಇದನ್ನು ಬರೆಯುತ್ತಿರುವೆ,
ಜ್ವರದಂತೆ ಕಾಡಲಿ ಪ್ರೀತಿಯಲ್ಲಿ ನಡೆಯುತ್ತಿರುವ ಈ ಮದುವೆ,
ಲವಲವಿಕೆಯ ಹೂಬಾಣವಾಗಲಿ ನಿಮ್ಮ ಕಥೆ,
ಅಮರವಾಗಲಿ ಈ ನಿಮ್ಮ ದಂತಕಥೆ,
ಪೇಚಾಟವಿಲ್ಲದೆ, ಸುಸೂತ್ರವಾಗಿ ನಡೆಯಲಿ ನಿಮ್ಮ ಜೀವನ,
ಕ್ಷಣಮಾತ್ರದ ಮುನಿಸಿಲ್ಲದ ಪ್ರತಿದಿನ,
ಪ್ರಜ್ವಲನಿಂದ ಇಷ್ಟೇ ಅಪೇಕ್ಷೆ,
ಅತ್ತಿಗೆ ಕಣ್ಣೀರಿಟ್ಟರೆ ಇದೇ ನಿಂಗೆ ಶಿಕ್ಷೆ,
ಮದುವೆಗಾಗಿ ಸಮತೋಲನ ಕಾಪಾಡಿ,
ಇದೇ ನಗುವ ತುಂಬಿರುವ ಜೀವನಕ್ಕೆ ಮುನ್ನುಡಿ.
- ವಿಕಾಸ ವಸಿಷ್ಠ (ಭಟ್ಟನ ಮದುವೆ ಪ್ರಯುಕ್ತ)
0 notes
onducupchaha · 3 years
Text
Tis' but another increment in time,
Abridging that which was and will be sublime,
A year gone at nobody's behest,
Its passage was surely god's jest,
Incredible were the lows this time around,
The sole high being: humanity's safe and sound,
We learnt that money matters not when our ticket's punched,
But the number of laurels and wreaths bunched,
Tis' been eerie and strange noting the past,
For it gives us something to look forward to atlast,
Cause nothing is permanent in this world,
Negativity doesn't always stay unfurled,
Let us step forth into the new year,
With well deserved fanfare and grandeur.
-Vikas Vasisht
0 notes
onducupchaha · 3 years
Text
ಹುಡುಕಿಹೆನು ನೂರಾರು ಜಾಗದಲ್ಲಿ,
ಕಂಡಿಹೆನು ಸಾವಿರಾರು ವ್ಯಕ್ತಿತ್ವವಲ್ಲಿ,
ನಾ ಕಾಣೆ ಯೆಂದೆಲ್ಲು ನಿನ್ನಂದವ,
ಕಾಡ ತೊಡಗಿಹೆ ನೀ ನನ್ನ ಸ್ವಪ್ನವ,
ಹಂಬಲಿಸು ಈ ಮೃದು ಜೀವಿಯ,
ಹಾತೊರೆಯುತ್ತಿರುವೆ ನಾ ನಿನ್ನ ಪ್ರೀತಿಯ.
ಕಲ್ಪಿಸು ನನ್ನೊಡನೆ ಸಿಹಿ ಸ್ನೇಹವ,
ನಾ ಬಯಸಲ್ಪಡುವ ಆ ಮಧುಮೇಹವ,
ಬೇರಿನ್ಯಾರೂ ಆಕರ್ಷಿಸಲಾಗದ ನನ್ನ ನೋಟವ,
ಸೆರೆ ಹಿಡಿದಿಟ್ಟುಕೊಂಡಿರುವ ನಿನ್ನ ಅಸ್ತಿತ್ವ.
ನಿನ್ನೊಡನೆ ಹೇಳಿಕೊಳ್ಳಲಾಗದಂತ ಈ ಭಾವನೆಗಳ,
ನಾ ಹೇಳದೆ ತಿಳಿದುಕೋ ಈ ಪರಿಸ್ಥಿತಿಯ ಗೋಳ,
ತಿಳಿದು ಬಾ ಎನ್ನ ಸನಿಹಕೆ,
ಇಗೋ ನಿನಗೆ ನನ್ನ ಆಹ್ವಾನ ಪತ್ರಿಕೆ.
- ವಿಕಾಸ ವಸಿಷ್ಠ
0 notes
onducupchaha · 3 years
Photo
Tumblr media
❤️ https://www.instagram.com/p/CRMYhV-FZcH0XfstUqcEvo4eNaIsLOmi6gxjsc0/?utm_medium=tumblr
1 note · View note
onducupchaha · 3 years
Photo
Tumblr media
ಈ ದುರಂತದ ಜೀವನಶೈಲಿಯಲ್ಲಿ ನಗುವ ಬೆಲೆಯೇ ಮರೆತವ ಕಾಯಕವೆಂಬ ಜಾಲಸುಳಿಯಲ್ಲಿ ಸಿಕ್ಕಿಕೊಂಡವ ದೇಹದ ದಣಿವನ್ನು ಅಳವಡಿಸಿಕೊಂಡವ ನೀನ್ಯಾರೋ ಮನುಜ ಬಾಳಿದವ? ನಗುವೆಂಬ ಅಮೃತ ನಾಲಕ್ಕು ತಾಸು ಸೇವಿಸುವವ ದಣಿವೆಂಬ ಪಾಷಾಣವ ದೇಹದಿಂದ ತ್ಯಜಿಸುವವ ಸ್ನೇಹಿತರೊಡನೆ ಕೂಡಿ ಸಂಭ್ರಮಿಸುವವ, ನೀನಿರುವೆಯೋ ಮನುಜ ತುಸು ಬಾಳಿದವ... - ವಿಕಾಸ ವಸಿಷ್ಠ https://www.instagram.com/p/CQ26tCUlq-nvucAoKxQUgB6P2diR9uLuwHwSxI0/?utm_medium=tumblr
0 notes
onducupchaha · 4 years
Photo
Tumblr media
ಅರ್ಪಿಸು, ಪಯಣಿಗ, ನೂರೊಂದು ಕಾಣಿಕೆ ಹುಂಡಿಗೆ, ಬೇಡಿಕೋ ಒಂದು ಚೂರು, ಅಡುಗೆ, ಉಡುಗೆ, ತರುವನು ಪರಮಾತ್ಮ ನಿನಗೊಂದು ಕೊಡುಗೆ, ಅವೆರಡರೊಂದಿಗೆ ಸಮಾನವಿಧಿಯ ನಡುಗೆ, ಹೊರಡು ಮತ್ತೊಮ್ಮೆ ಹಸಿರು ತುಂಬಿದ ಕಾಡಿಗೆ, ಪಯಣವಿದು ಅಪರಿಮಿತ ಖುಷಿಯ ಕಡೆಗೆ! - ವಿಕಾಸ ವಸಿಷ್ಠ #zaroha @dr.riderpushpesh @d13ruv @domrider1055 https://www.instagram.com/p/CFduWoyFBiWQmuSySiFx9jfsQuFYpm4cgQeQw40/?igshid=kddcgtcb1w7g
1 note · View note
onducupchaha · 4 years
Photo
Tumblr media
ಮತ್ತೆ ಶುರುವಾಯಿತು ಪಯಣ, ಕೆಲ ಮಾಸಗಳ ನಂತರ, ಸಮಯದ ಅಭಾವದ ನೆರಳಿಲ್ಲದ, ಒಂದು ದಿನದ ಶಡ್ಯಂತರ, ನೂರಾ ಐವತ್ತು ಮೈಲಿಗಳ ಈ ಪಯಣದ ಜ್ಞಾಪಕ ಮಾತ್ರ ನಿರಂತರ, ಎದೆಯ ಮೇಲಿದ್ದ ಭಾರವ ಇಳಿಸಿದ ಆ ಗಂಟೆಯ ಸಂಭಾಷಣೆ ಅತಿಮಧುರ, ಬಿಡಬೇಡ ಪಯಣಿಗ, ಎಂದೆಂದೂ ನಿನ್ನ ಸ್ನೇಹಿತರ... - ವಿಕಾಸ ವಸಿಷ್ಠ https://www.instagram.com/p/CEefqQMF-Bhhg4MVVGGCQH9QB-UUphpfuvj6bo0/?igshid=7ii9pywmypzu
0 notes
onducupchaha · 4 years
Photo
Tumblr media
ಮತಿಯಿಂದ ಮಿತಿಯನ್ನು ಅಳೆಯಲಾಗುವುದೇ? ಮಿತಿಯಿಂದ ಮನುಜನ ಅಳೆಯಲಾಗುವುದೇ? ಮಾನವ ಚೈತನ್ಯವನ್ನು ಮಿತಿಯ ಮುರಿಕೆಯಿಂದ ಹೊರತುಪಡಿಸಲಾಗುವುದೆ? ಇಗೋ ಗೆಲ್ಲುವೆ, ಇಂದಲ್ಲವಾದರೂ, ಖಂಡಿತ ಗೆಲವು ನನ್ನದೇ!!! #strava #stravacycling @dr.riderpushpesh https://www.instagram.com/p/CD5sVDcF9eeKL5_SeA0PCoZ_Gt_n8JV0om3KJg0/?igshid=jgy5sgfybc4o
0 notes
onducupchaha · 4 years
Photo
Tumblr media
#edcgear https://www.instagram.com/p/CDmGKpjF6pRFdpw5CAcoWXSR8dLWNPqcrlAAIs0/?igshid=kynqaa1swb6l
1 note · View note
onducupchaha · 4 years
Text
ಕಪ್ಪು ಬಿಳುಪಿನ ಹಿರಿಮೆ ಕಿರಿಮೆಯಿಂದ ಬಳಲುತ್ತಿರುವ ಜಗವೇ,
ಕಪ್ಪು ಕೀಳೆಂಬ ಭಾವನೆಯೇಕೆ ಬಿಳುಪೇ?
ಬೆಳ್ಳಗಿರುವ ನೀನು ಪರಿಶುದ್ಧನ��� ಆದರೆ,
ಜ್ಞಾನಿಯ ವಿವರಣಾತ್ಮಕ ರಂಗೇ ಕಪ್ಪಲ್ಲವೇ?
ಬೆಳಕು ಬಿಳುಪು ಕತ್ತಲು ಕಪ್ಪಾದರೆ,
ಬೆಳಕಿನ ಅನುಪಸಥಿತಿಯೇ ಕಗ್ಗತ್ತಲಲ್ಲವೇ?
ಕತ್ತಲಲ್ಲಿರುವವರು ಬೆಳ್ಳಗಿರುವರು ಹಾಗೂ,
ಬೆಳಕಲ್ಲಿ ದಣಿದವರು ಕಪ್ಪಾಗುವುದು ಪ್ರಕೃತಿಯ ವಿರೋಧಾಭಾಸವಲ್ಲವೇ?
ಈ ಪ್ರಹಸನ ಬಿಟ್ಟು ಕೂಡಿ ಬಾಳುವುದು ಕಲಿ, ಓ ಮನುಜನೆ.
-ವಿಕಾಸ ವಸಿಷ್ಠ
0 notes
onducupchaha · 4 years
Text
ಮುಗ್ಧೆ ಅವಳು, ಹಸಿವೆಂದು ಬಂದಳು
ಕ್ರೂರಿ ಇವನು, ಪರಿಸ್ಥಿತಿಯ ದುರುಪಯೋಗ ಪಡೆದನು
ಆತ ಪಠಾಕೆ ಬಡಿಸಿದನು, ಈಕೆ ನಂಬಿ ತಿಂದಳು
ಅವಳ ಪರಿಸ್ಥಿತಿ ಹಾಗೂ ಹಸಿವೇ ತಪ್ಪೇ?
ಅದಕ್ಕೆ ಕಾರಣನಾದ ಇವನ ಕ್ರೌರ್ಯಕ್ಕೆ ಮಿತಿಯಿಲ್ಲವೆ?
ಇವೆಲ್ಲದರ ಮಧ್ಯೆ ಕಣ್ಬಿಡದ ಕೂಸೊಂದು ಕೊಲೆಯಾಯಿತಲ್ಲವೆ?
ಈ ಜಗವನ್ನು ಅವನಿಂದ ರಕ್ಷಿಸು, ಓ ಪ್ರಭುವೇ!!!
- ವಿಕಾಸ ವಸಿಷ್ಠ
0 notes
onducupchaha · 4 years
Text
ಮನಸ್ಸಿನ ರಹಸ್ಯಮಯ ಕೊಠಡಿಯಿಂದ ಹೊರಹೊಮ್ಮಿ,
ನವಿಲುಗರಿಯಾಗಿ ಕೈಸೇರಿ,
ಕಾಗದದಿ ನನ್ನ ಕೈ ಹಿಡಿದು ಸರಸವನ್ನಾಡಿಸಿ,
ನನ್ನಂತರಾಳವ ಬೆಳಕಿಗೆ ತಂದೆ.
ಹಲವು ಅಕ್ಷರಗಳು ಪದಗಳಾಗಿ ಒಗ್ಗೂಡಿ,
ನಾ ಹೇಳಬಯಸುವುದನ್ನ ನೀ ಕಲ್ಪಿಸಿಕೊಂಡು,
ನೀ ಕಲ್ಪಿಸಿಕೊಂಡದ್ದು ಭವಾನೆಗಳಾಗಿ,
ನಿನ್ನಂತರಾಳದಿ ಕತ್ತಲನ್ನು ನಿರಂತರವಾಗಿ ಸೇರುವುದೆ?
- ವಿಕಾಸ ವಸಿಷ್ಠ
0 notes