Tumgik
saakshatv-blog · 4 years
Text
ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆದು ಧನ್ಯವಾದ ಸಲ್ಲಿಸಿದ ಸಿ.ಎಂ ಯಡಿಯೂರಪ್ಪ
ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ  ಜನತಾ ಕರ್ಪ್ಯೂ ಬೆಂಬಲಿಸಿದ್ದಾರೆ. ಇಂದು ಸಂಜೆ ಐದು ಗಂಟೆಗೆ ಮನೆಯ ಕಿಟಕಿ, ಬಾಲ್ಕನಿ, ಬಾಗಿಲ ಬಳಿ ನಿಂತು ಚಪ್ಪಾಳೆ ಹೊಡೆಯುವ ಮೂಲಕ ಕೊರೊನಾ ಸೋಂಕು ಲೆಕ್ಕಿಸದೆ ಸೇವೆ ಮಾಡುತ್ತಿರುವವರಿಗೆ ಧನ್ಯವಾದಗಳು ಸಲ್ಲಿಸಿ ಎಂದು ಪಿ.ಎಂ ನರೇಂದ್ರ ಮೋದಿ ಹೇಳಿದ್ದರು. ಹಾಗಾಗಿ ಸಿ.ಎಂ ಯಡಿಯೂರಪ್ಪ ಡಾಲರ್ಸ್ ಕಾಲೋನಿಯಲ್ಲಿರುವ   ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆದು ಧನ್ಯವಾದ ಸಲ್ಲಿಸಿದ್ದಾರೆ. ಬಳಿಕ ಬಿತ್ತಿ…
View On WordPress
0 notes
saakshatv-blog · 4 years
Photo
Tumblr media
ಮಾರ್ಚ್ 31 ರವರೆಗೂ ರಾಜ್ಯ ಲಾಕ್ ಡೌನ್... ಕೊರೊನಾ ಹರಡುವಿಕೆ ತಡೆಗಟ್ಟಲು ಜಾರಿ ಮಾಡಿದ ಜನತಾ ಕರ್ಫ್ಯೂ ಯಶಸ್ವಿಯಾಗಿದೆ.ಮತ್ತೊಂದೆಡೆ ದೇಶದಲ್ಲಿ ಕೊರೊನಾ ವೈರಸ್ ಗೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತದೆ. ಅದಕ್ಕಾಗಿ ಮಾರ್ಚ್ 31 ರವರೆಗೂ ರಾಜ್ಯದಲ್ಲಿ ಸಾರ್ವಜನಿಕ ಸೇವೆಯನ್ನು ರದ್ದು ಮಾಡಲಾಗಿದೆ.
0 notes
saakshatv-blog · 4 years
Photo
Tumblr media
ಕೊರೊನ ತಡೆಗೆ ಮುಂದುವರಿದ ಸರಕಾರದ ಪ್ರಮುಖ ನಿರ್ಧಾರ: ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಬೆಂಗಳೂರು ನಗರ ಮತ್ತು ಗ್ರಾಮಾಂತರ,ಮೈಸೂರು,ಕೊಡಗು,ಕಲ್ಬುರ್ಗಿ,ಚಿಕ್ಕಬಳ್ಳಾಪುರ,ಮಂಗಳೂರು, ಹುಬ್ಬಳ್ಳಿ & ಧಾರವಾಡ ಬೆಳಗಾವಿ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರಕಾರ ನಿರ್ಧಾರ. ಬೆಂಗಳೂರಿನಲ್ಲಿ ಈಗಾಗಲೇ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಗಿಯಲಿದೆ.
0 notes
saakshatv-blog · 4 years
Text
ಜನತಾ ಕರ್ಫ್ಯೂ ಗೆ ಇಂದು ಕರ್ನಾಟಕದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಜನಜಂಗುಳಿಯಿಂದ ತುಂಬಿರುತ್ತಿದ್ದ ಸ್ಥಳಗಳು ಜನರಿಲ್ಲದೇ ಬಿಕೋ ಎನ್ನುತ್ತಿದೆ.
ಪ್ರಧಾನಿ ಮೋದಿಯವರು ಕೊರೋನಾ ವಿರುದ್ಧ ಹೋರಾಡಲು 22 ಮಾರ್ಚ್ ರಂದು ಜನತಾ ಕರ್ಫ್ಯೂ ಆಚರಿಸುವಂತೆ ಜನರಿಗೆ ಕರೆಕೊಟ್ಟಿದ್ದರು.
View On WordPress
0 notes
saakshatv-blog · 4 years
Text
ಕ್ರಿಕೆಟಿಗರಿಂದ ಜನತಾ ಕರ್ಫ್ಯೂ ಗೆ ಬೆಂಬಲ
ಜಗತ್ತಿನಾದ್ಯಂತ ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿದ್ದು, ಜಗತ್ತೇ ಸ್ತಬ್ಧವಾಗಿದೆ. ಬಹುತೇಕ ಎಲ್ಲಾ ಚಟುವಟಿಕೆಗಳು ನಿಂತಿದ್ದು, ಸಿನಿಮಾ ತಾರೆಯರು, ಆಟಗಾರರು ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಇರುವುದರೊಂದಿಗೆ ತಮ್ಮ ಅಭಿಮಾನಿಗಳಿಗೆ ಕೊರೊನಾ ವಿರುದ್ಧ ಹೋರಾಡಲು ಸಿದ್ಧರಾಗಿ ಎಂದು ಸಂದೇಶ ರವಾನಿಸುತ್ತಿದ್ದಾರೆ.
ಇಂಗ್ಲೆಂಡ್ ಮಾಜಿ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕೇವಿನ್ ಪೀಟರ್ಸನ್ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ಹಿಂದಿಯಲ್ಲಿ ಟ್ವೀಟ್…
View On WordPress
0 notes
saakshatv-blog · 4 years
Photo
Tumblr media
ಕೊರೋನಾ ಭೀತಿ- ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಗಳು ಮುಂದಕ್ಕೆ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇಂದು ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ ಎಸ್ ಯಡಿಯೂರಪ್ಪ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
0 notes
saakshatv-blog · 4 years
Photo
Tumblr media
ಜಗತ್ತಿನಾದ್ಯಂತ ಮರಣದಂಡನೆ ಶಿಕ್ಷೆಯ ಮೇಲೆ ನಿಷೇಧಕ್ಕೆ ವಿಶ್ವಸಂಸ್ಥೆ ಕರೆ ಏಳು ವರ್ಷಗಳ ಹಿಂದೆ ನಿರ್ಭಯಾಳನ್ನು ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದ, ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಿದ ಮರುದಿನವೇ ‌ವಿಶ್ವಸಂಸ್ಥೆ ಮರಣದಂಡನೆ ಶಿಕ್ಷೆ ಮೇಲೆ ನಿಷೇಧ ಹೇರುವಂತೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.
0 notes
saakshatv-blog · 4 years
Photo
Tumblr media
ರಾಷ್ಟ್ರಪತಿಗಳಿಗೂ ಕಾಡಿದ ಕೊರೊನಾ ಭೀತಿ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ತಗುಲಿರುವ ಕೊರೊನಾ ಸೋಂಕು ಸಂಸದ ದುಶ್ಯಂತ್ ಸಿಂಗ್ ಮತ್ತು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನೂ ಕಾಡಿದೆ.
0 notes
saakshatv-blog · 4 years
Text
ಮೈಸೂರಿನಲ್ಲಿ ಕೊರೊನಾ : ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ!
ಮೈಸೂರು: ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಹೊರತಾಗಿಯೂ ಕೊರೊನಾ ಸೋಂಕು ತನ್ನ ಕಬಂದ ಬಾಹುಗಳನ್ನು ಚಾಚುತ್ತಲೇ ಇದೆ. ಇಂದು ಮೈಸೂರಿನಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ವ್ಯಕ್ತಿ ದುಬೈನಿಂದ ಗೋವಾ, ಅಲ್ಲಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾನೆ. ಇಂದು ಒಂದೇ ದಿನ ರಾಜ್ಯದಲ್ಲಿ 5 ಕೊರೊನಾ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಸಚಿವ ಶ್ರೀ ರಾಮುಲು ಮಾಹಿತಿ ನೀಡಿದ್ದಾರೆ.…
View On WordPress
0 notes
saakshatv-blog · 4 years
Text
ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಸಿ.ಎಂ. ಯಡಿಯೂರಪ್ಪ ಫುಲ್ ಗರಂ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆಗಿದ್ದಾರೆ. ನಾಳೆ ಜನತಾ ಕರ್ಫ್ಯೂ ಇರುವ ಕಾರಣಕ್ಕೆ ಜನಸಾಮಾನ್ಯರು ಅನಗತ್ಯವಾಗಿ ಹೊರ ಬಂದರೆ ಕೇಸ್ ದಾಖಲು ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದರು. ಇದಕ್ಕೆ ಗರಂ ಆಗಿರುವ ಸಿ.ಎಂ ಯಡಿಯೂರಪ್ಪ ಹಾಗಂತ ಯಾವನ್ ರೀ ಹೇಳಿದ್ದು ಎಂದು ಕಿಡಿಕಾರಿದ್ದಾರೆ.
ನಾಳೆ ನಡೆಯುವ ಜನತಾ ಕರ್ಫ್ಯೂವನ್ನು ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಳ್ಳುಬೇಕು. ಪ್ರವಾಸ, ವಾಕಿಂಗ್ ಅಂತ…
View On WordPress
0 notes
saakshatv-blog · 4 years
Text
ಮಧ್ಯಪ್ರದೇಶದಲ್ಲಿ "ಪಿಕ್ಚರ್ ಅಭಿ ಬಾಕಿ ಹೈ ಎಂದ ಕಾಂಗ್ರೆಸ್": ಇದರ ಗುಟ್ಟೇನು?
ಕೇಸರಿಪಡೆಗೆ ಟಕ್ಕರ್ ನೀಡಲು ಕಾಂಗ್ರೆಸ್ ಸಿದ್ಧತೆ ಗಾಯಗೊಂಡ ಹುಲಿಯಂತಾದ ಕಾಂಗ್ರೆಸ್, ಬೇಟೆಗೆ ರೆಡಿ ಆ.15ಕ್ಕೆ ಸಿಎಂ ಆಗಿ ಕಮಲನಾಥ್ ಧ್ವಜಾರೋಹಣ
ಭೂಪಾಲ್:ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟಿಗೆ ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ ಮೂಲಕ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು. ಆದ್ರೆ ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಆ ಒಂದು ಟ್ವೀಟ್ ಪಿಕ್ಚರ್ ಅಭಿ ಬಾಕಿ ಹೈ ಎಂಬ ಸುಳಿವು ನೀಡಿದೆ. ಮುಖ್ಯಮಂತ್ರಿ ಕಮಲನಾಥ್ ಶುಕ್ರವಾರ ಮಧ್ಯಾಹ್ನದ ವೇಳೆಗೆ ರಾಜ್ಯಪಾಲರಾದ ಲಾಲ್ಜಿ ಟಂಡನ್ ಅವರನ್ನು ಭೇಟಿ ಮಾಡಿ…
View On WordPress
0 notes
saakshatv-blog · 4 years
Text
ಕೊರೊನಾ ಬಗ್ಗೆ ಭಯ ಬೇಡ, ಆದರೆ ಮುನ್ನೆಚ್ಚರಿಕೆ ಇರಲಿ : ಪಿ.ಎಂ ನರೇಂದ್ರ ಮೋದಿ
ಕೊರೊನಾ ವಿರುದ್ದ ಹೋರಾಟ ನಡೆಸಲು ದೇಶವೇ ಸಜ್ಜಾಗಿದೆ. ನಾಳೆ ದೇಶದಾದ್ಯಂತ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಮಾರ್ಚ್ 19 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾರ್ಚ್ 22 ರಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಗೆ ವರೆಗೂ ಮನೆಯಿಂದ ಹೊರ ಬರಬೇಡಿ ಎಂದು ಮನವಿ  ಮಾಡಿದ್ದರು. ಹಾಗಾಗಿ ನಾಳೆ ಜನತಾ ಕರ್ಫ್ಯೂ ನಡೆಸಲು ದೇಶದ ಜನರು ಸಿದ್ದರಾಗಿದ್ದರು. ಇದರ ಬೆನ್ನೆಲ್ಲೇ ಮೋದಿ ಟ್ವೀಟ್ ಮಾಡುವ ಮೂಲಕ ಜನತಾ ಕರ್ಫ್ಯೂ ಅನ್ನು ನೆನಪಿಸಿದ್ದಾರೆ. “ಕೊರೊನಾ…
View On WordPress
0 notes
saakshatv-blog · 4 years
Text
ಟ್ವಿಟರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಹುಲಿಯಾ ಸಿದ್ದರಾಮಯ್ಯ
ಟ್ವಿಟರ್ ನಲ್ಲಿ ಕೇಂದ್ರ ಸರ್ಕಾರ ವಿರುದ್ಧ ಸಿದ್ದರಾಮಯ್ಯ ಕಿಡಿ
ಜನರನ್ನು ದಾರಿ ತಪ್ಪಿಸುತ್ತಿದ್ದೀಯಾ ಕೇಂದ್ರ ಸರ್ಕಾರ ?
ಸರ್ಕಾರದ ಬಳಿ ಕೇವಲ 1.5 ಲಕ್ಷ ಪರೀಕ್ಷಾ ಕಿಟ್ ಗಳಿವೆ
ಕೊರೊನಾ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ವಿರುದ್ದ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಸೋಂಕು ಪರೀಕ್ಷೆಗಳನ್ನು ಹೆಚ್ಚಿಸದೆ, ಕೊರೊನಾ ಹರಡುವಿಕೆ ಎರಡನೇ ಹಂತದಲ್ಲಿದೆ ಎಂದು ನಿರ್ಧರಿಸುವುದು, ಜನರನ್ನು ದಾರಿ ತಪ್ಪಿಸುವಂತಿದೆ. ಕೊರೊನಾ ವೈರಸ್ ಪರೀಕ್ಷಾ ಕಿಟ್ ಗಳ ಕೊರತೆ ಇದೆ.…
View On WordPress
0 notes
saakshatv-blog · 4 years
Text
ಎಟಿಎಂ, ಹಣದಿಂದ ಕೊರೊನಾ ಸೋಂಕು ಹರಡುತ್ತೆ!
ಎಟಿಎಂ, ಹಣದಿಂದ ಕೊರೊನಾ ಹರಡುತ್ತೆ: ಹೆಚ್ ಡಿಕೆ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ರಾಜ್ಯದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ರಾಜ್ಯದ ಯಾವುದೇ ಎಟಿಎಮ್ ನಲ್ಲೂ ಸುರಕ್ಷೆ ಇಲ್ಲ . ದಿನನಿತ್ಯ ಹಣ ಡ್ರಾ ಮಾಡಲು ನೂರಾರು ಗ್ರಾಹಕರು ಎಟಿಎಮ್ ಗಳಿಗೆ ಬರ್ತಾರೆ. ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮ ತಕ್ಷಣವೇ ತೆಗೆದುಕೊಳ್ಳಬೇಕು. ಪ್ರತಿ ಎಟಿಎಂ ಕೇಂದ್ರಗಳಲ್ಲಿ…
View On WordPress
0 notes
saakshatv-blog · 4 years
Text
ಕೊರೊನಾ ಸೋಂಕಿತನಿಂದ ರಕ್ತದಾನ!?
ದೇಶದೆಲ್ಲೆಡೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ರಾಜ್ಯದಲ್ಲೂ ಸದ್ಯದ ವರದಿ ಪ್ರಕಾರ ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ. ಇದರಿಂದ ಜನರು ಆತಂಕಕ್ಕೀಡಾಗಿದ್ದು, ಇದೀಗ ರಾಜ್ಯವನ್ನೇ ಬೆಚ್ಚಿಬೀಳಿಸುವ ಸುದ್ದಿವೊಂದು ಬಹಿರಂಗವಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ರಕ್ತದಾನ ಮಾಡಿದ್ದಾನೆ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.
ಕೇರಳದ ಕಾಸರಗೋಡಿನಲ್ಲಿ ಕೊರೊನಾ ಸೋಂಕಿತ ಪ್ರಕರಣವೊಂದು ಪತ್ತೆಯಾಗಿದ್ದು, ಸೋಂಕಿತ ವ್ಯಕ್ತಿ, ನಿನ್ನೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ರಕ್ತದಾನ…
View On WordPress
0 notes
saakshatv-blog · 4 years
Text
ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವಿಮಾನ ಟಿಕೆಟ್ ಮಾಡಿಸಿಕೊಟ್ಟ ಬಿ.ಎಸ್.ವೈ
ಕೊರೋನಾ ಭೀತಿ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.  ಹೀಗಾಗಿ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ರಾಜ್ಯಕ್ಕೆ ಓದುಲು ಬಂದ ಹೊರ ರಾಜ್ಯದ ವಿಧ್ಯಾರ್ಥಿಗಳು ತಮ್ಮ ತವರಿಗೆ ತೆರಳಲು ಪರದಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ನೆರವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಡಾರ್ಜಲಿಂಗ್ ಮೂಲದ 4 ವಿದ್ಯಾರ್ಥಿಗಳು ರಾಜ್ಯದಲ್ಲಿ ನರ್ಸಿಂಗ್ ವ್ಯಾಸಂಗ…
View On WordPress
0 notes
saakshatv-blog · 4 years
Text
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆತಂಕ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 4 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ.
ಈ ಕುರಿತಂತೆ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಇಂದು ರಾಜ್ಯದಲ್ಲಿ ನಾಲ್ವರಿಗೆ ಕೊರೊನಾ ವೈರಸ್ ಸೋಂಕಿರುವುದ�� ದೃಢಪಟ್ಟಿದೆ. ಗೌರಿಬಿದನೂರಿನ ಒಬ್ಬರಿಗೆ ಹಾಗೂ ಬೆಂಗಳೂರಿನಲ್ಲಿ ಮೂವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ…
View On WordPress
0 notes