Tumgik
#threeagribills
m-n-naik · 3 years
Photo
Tumblr media
ಮೂರು ಖುಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರೈತ ಹೋರಾಟಕ್ಕೆ ಹೆದರಿ ಹಿಂಪಡೆದು, 3 ತಿಂಗಳುಗಳಾದರೂ ರಾಜ್ಯ ಸರ್ಕಾರ ಇನ್ನುವರೆಗೂ 3 ಖುಷಿ ಕಾನೂನುಗಳನ್ನು ಹಿಂದಕ್ಕೆ ಪಡೆದಿಲ್ಲ, ಕರ್ನಾಟಕ ರಾಜ್ಯ ರೈತ ಸಂಘದಿಂದ ದಿನಾಂಕ 14/12/2022 ರಂದು ಬೆಳಗಾವಿ ಚಳಿಗಾಲ ಅಧಿವೇಶನ ಸಮಯದಲ್ಲಿ ಹೋರಾಟವನ್ನು ಕದ್ದಿದ್ದು ಅವಾಗ ಮುಖ್ಯಮಂತ್ರಿಗಳು, ಬಿಸಿ ಪಾಟೀಲ್ ಹಾಗೂ ಭೈರತಿ ಬಸವರಾಜ್ ಅವರನ್ನು ಕಳುಹಿಸಿ ರೈತರಿಗೆ ಆಶುವಾಷಣೇ ನೀಡಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡುತ್ತೇವೆ ಎಂದು ಹೇಳಿದರು ಆದರೆ ಚಳಿಗಾಲ ಅಧಿವೇಶನದ ಒಂದು ವಾರ ಕಳೆದರೂ ಸರ್ಕಾರ ಮೂರು ಖುಷಿ ಕಾನೂನುಗಳ ಬಗ್ಗೆ ಮಾತನಾಡಿಲ್ಲ. ಅದಕ್ಕೆ ದಿನಾಂಕ 20/12/2022 ರಂದು ಮತ್ತೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹೋರಾಟವನ್ನು ಕರೆಯಲಾಯಿತು ಹೋರಾಟದ ಬಿಸಿಯನ್ನು ಕಂಡಿದ್ದ ಬಸವರಾಜ್ ಬೊಮ್ಮಾಯಿ ನಮ್ಮನ್ನು ವಿಕಾಸಸೌಧ ಬೆಳಗಾವಿಗೆ ಕರೆದು ಈ ಅಧಿವೇಶನದಲ್ಲಿ ಕೆಲವು ಸಮಸ್ಯೆಗಳು ಇರುವುದರಿಂದ 3 ಕೃಷಿ ಕಾನೂನುಗಳನ್ನು ಹಿಂಪಡೆಯುವ ಪ್ರಸ್ತಾವನೆಯನ್ನು ಮಂಡಿಸಲು ಸಾಧ್ಯವಾಗಲಿಲ್ಲ ಆದರೆ ಮುಂದಿನ ಅಧಿವೇಶನದಲ್ಲಿ ಖಂಡಿತವಾಗಿಯೂ 3 ಖುಷಿ ಕಾನೂನಗಳನ್ನು ವಿಧಾನಸೌಧದಲ್ಲಿ ಚರ್ಚಿಸಿ ಹಿಂಪಡೆಯುತ್ತೇವೆ ಎಂದು ಮಾತುಕೊಟ್ಟರು ಆದರೆ ಈ ಅಧಿವೇಶನದಲ್ಲಿ ಚರ್ಚಿಸುವ ವಿಷಯಗಳಲ್ಲಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಪ್ರಸ್ತಾವನೆ ಇಲ್ಲದ ಕಾರಣ ಕರ್ನಾಟಕ ರಾಜ್ಯ ರೈತ ಸಂಘದಿಂದ ವಿಧಾನಸೌಧ ಮುತ್ತಿಗೆ ಹೋರಾಟವನ್ನು ಕರೆಯಲಾಯಿತು, ಹೋರಾಟದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ಪಾಲ್ಗೊಂಡಿದ್ದು ಕಂಡುಕೊಂಡ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಲಿಲ್ಲ ದ ಕಾರಣ ಕರ್ನಾಟಕ ರಾಜ್ಯ ರೈತ ಸಂಘ ವಿಧಾನಸೌಧ ಮುತ್ತಿಗೆ ರ್ಯಾಲಿಯನ್ನು ಪೊಲೀಸರು ಫ್ರೀಡಂ ಪಾರ್ಕ್ ಸರ್ಕಲ್ ಹತ್ತಿರ ತಡೆದರು ಆಗ ರೈತರು ಅನಿರ್ದಿಷ್ಟ ಕಾಲ ಡೈಲಿ ಮಾದರಿ ರೋಡಲ್ಲೇ ಟೆಂಟ ಹಾಗೂ ಅಡುಗೆ ಮಾಡಲು ತಯಾರಿಯನ್ನು ಕಂಡು ಪೊಲೀಸರು ಸರ್ಕಾರಕ್ಕೆ ಒತ್ತಾಯ ಮಾಡಿದಾಗ ಸರ್ಕಾರ ಒಂದು ತಂಡವನ್ನು ಕಳುಹಿಸಿ ಈ ಅಧಿವೇಶನದಲ್ಲಿ ಮೂರು ಖುಷಿ ಕಾನೂನುಗಳನ್ನು ಹಿಂಪಡೆಯುತ್ತೇವೆ ಎಂದು ವಿನಂತಿಸಿದರು. ಆದಕಾರಣ ಚಳವಳಿಯನ್ನು ಹಿಂದಕ್ಕೆ ಪಡೆಯಲು ರೈತರು ಒಪ್ಪಿದ್ದರು. #threeagribills #farmersprotestbangalore #mnnaik #kodihallichandrashekhar # farmersrally #freedompark #bangalorepolice #BJP4Karnataka #BJP4Haveri #inckarnataka #inchaveri (at Bangalore, India) https://www.instagram.com/p/CaAGurJNNNn/?utm_medium=tumblr
0 notes